Subsidy: ಗ್ರಾಮೀಣ ಉದ್ಯಮಕ್ಕಾಗಿ ₹25 ಲಕ್ಷ ಸಬ್ಸಿಡಿ.!
ಗ್ರಾಮೀಣ ಯುವಕರಿಗೆ ಹೊಸ ಭರವಸೆ – ಕೋಳಿ, ಕುರಿ, ಮೇಕೆ, ಹಂದಿ ಮತ್ತು ರಸಮೇವು ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರದ ಬೆಂಬಲ.!
ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆದಾಯದ ಅವಕಾಶಗಳನ್ನು ಹೆಚ್ಚಿಸಲು ಭಾರತ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಜಾನುವಾರು ಮಿಷನ್ (National Livestock Mission – NLM) ಯೋಜನೆ, ಇದೀಗ ನೂತನ ರೂಪದಲ್ಲಿ ಪುನಶ್ಚೇತನಗೊಂಡಿದೆ. ಈ ಯೋಜನೆಯ ಅಡಿಯಲ್ಲಿ ಕೃಷಿಕರು ಮತ್ತು ಯುವ ಉದ್ಯಮಿಗಳು ಕೋಳಿ, ಕುರಿ-ಮೇಕೆ, ಹಂದಿ ಮತ್ತು ರಸಮೇವು ಘಟಕಗಳನ್ನು ಸ್ಥಾಪಿಸಿ ₹25 ಲಕ್ಷದವರೆಗೆ ಸಬ್ಸಿಡಿ(Subsidy) ಪಡೆಯಬಹುದಾಗಿದೆ.
ಯೋಜನೆಯ ಮೂಲ ಉದ್ದೇಶ ಏನು.?
- ಗ್ರಾಮೀಣ ಪ್ರದೇಶದ ಉದ್ಯಮಶೀಲತೆಗೆ ಉತ್ತೇಜನ ನೀಡುವುದು
- ಮಾಂಸ, ಮೊಟ್ಟೆ, ಉಣ್ಣೆ ಉತ್ಪಾದನೆ ಹೆಚ್ಚಿಸಿ ಆಹಾರ ಭದ್ರತೆಗೆ ಕೊಡುಗೆ ನೀಡುವುದು
- ಪರಿಸರ ಸ್ನೇಹಿ ರಸಮೇವು ಉತ್ಪಾದನೆಗೆ ಉತ್ತೇಜನ
- ಬಡ ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕವಾಗಿ ನೆಲೆಯೂರಿಸಲು ನೆರವು
ಪ್ರಮುಖ ಪ್ರಯೋಜನಗಳು:
- ಉದ್ಯೋಗ ಸೃಷ್ಟಿ ಮೂಲಕ ಗ್ರಾಮೀಣ ಜೀವನಮಟ್ಟವನ್ನು ಸುಧಾರಣೆ
- ನೈಜ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸರ್ಕಾರದಿಂದ ಶೇ.50ರಷ್ಟು ಸಬ್ಸಿಡಿ
- ಆಹಾರ ಸುರಕ್ಷತೆಗಾಗಿ ಜಾನುವಾರು ಉತ್ಪನ್ನಗಳ ಉತ್ಪಾದನೆಯು ಹೆಚ್ಚಳ
- ಹೂಡಿಕೆಗೆ ಸರಳ ಅರ್ಜಿ ವಿಧಾನ, ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆ
ಯೋಜನೆಯ ಅಡಿಯಲ್ಲಿ ಲಭ್ಯವಿರುವ ಘಟಕಗಳ ವಿವರ
ಕೋಳಿ ಸಾಕಾಣಿಕೆ ಘಟಕ:
- ಘಟಕ ವೆಚ್ಚ: ₹50 ಲಕ್ಷ
- ಸಬ್ಸಿಡಿ: ಶೇ.50 ರಷ್ಟು, ಗರಿಷ್ಠ ₹25 ಲಕ್ಷ
ಕುರಿ-ಮೇಕೆ ಘಟಕದ ಆಯ್ಕೆಗಳು:
ಘಟಕ ಗಾತ್ರ | ಯೋಜನೆ ವೆಚ್ಚ | ಸಬ್ಸಿಡಿ (ಶೇ.50%) |
---|---|---|
500+25 | ₹1 ಕೋಟಿ | ₹50 ಲಕ್ಷ |
400+20 | ₹80 ಲಕ್ಷ | ₹40 ಲಕ್ಷ |
300+15 | ₹60 ಲಕ್ಷ | ₹30 ಲಕ್ಷ |
200+10 | ₹40 ಲಕ್ಷ | ₹20 ಲಕ್ಷ |
100+5 | ₹20 ಲಕ್ಷ | ₹10 ಲಕ್ಷ |
ಹಂದಿ ಸಾಕಾಣಿಕೆ ಘಟಕ:
ಘಟಕ ಗಾತ್ರ | ಯೋಜನೆ ವೆಚ್ಚ | ಸಬ್ಸಿಡಿ (ಶೇ.50%) |
---|---|---|
100+10 | ₹60 ಲಕ್ಷ | ₹30 ಲಕ್ಷ |
50+5 | ₹30 ಲಕ್ಷ | ₹15 ಲಕ್ಷ |
ರಸಮೇವು ಉತ್ಪಾದನಾ ಘಟಕ:
- ಘಟಕ ವೆಚ್ಚ: ₹1 ಕೋಟಿ
- ಸಬ್ಸಿಡಿ: ಗರಿಷ್ಠ ₹50 ಲಕ್ಷ
ಅರ್ಜಿಸುವ ವಿಧಾನ (Steps to Apply Online):
1️⃣ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ
2️⃣ “Login as Entrepreneur” ಆಯ್ಕೆಮಾಡಿ
3️⃣ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ → OTP ಪಡೆಯಿರಿ
4️⃣ OTP ಹಾಕಿ → VERIFY OTP ಕ್ಲಿಕ್ ಮಾಡಿ
5️⃣ ಅರ್ಜಿ ಫಾರ್ಮ್ ಭರ್ತಿ ಮಾಡಿ → ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
6️⃣ “Submit” ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರಗಳು
- ವ್ಯಾಪಾರ ಯೋಜನೆ (Project report)
- ಭೂಮಿ ದಾಖಲೆ ಅಥವಾ ಬಾಡಿಗೆ ಒಪ್ಪಂದ
- ಪಾಸ್‌ಪೋರ್ಟ್ ಗಾತ್ರದ ಫೋಟೋ
ಯಾರ್ಯಾರು ಅರ್ಜಿ ಹಾಕಬಹುದು.?
- 18 ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕರು
- ಜಾನುವಾರು ಸಾಕಾಣಿಕೆ ಅಥವಾ ಕೃಷಿ ಸಂಬಂಧಿತ ಉದ್ಯಮದ ಆಸಕ್ತಿ ಹೊಂದಿರುವವರು
- ಬ್ಯಾಂಕ್ ಲೋನ್ ಪಡೆಯುವ ಅರ್ಹತೆ ಹೊಂದಿರುವವರು
ಉಪಯುಕ್ತ ಲಿಂಕ್‌ಗಳು:
ಹೈಟೆಕ್ ಜಾನುವಾರು ಘಟಕಗಳನ್ನು ಸ್ಥಾಪಿಸಿ ಗ್ರಾಮೀಣ ಆರ್ಥಿಕತೆಯಲ್ಲಿ ಬದಲಾವಣೆ ತರಲು ಇದು ಒಂದು ಬೃಹತ್ ಅವಕಾಶವಾಗಿದೆ. ಉತ್ಸಾಹಿ ಯುವಕರು ಈ ಯೋಜನೆಯ ಸದುಪಯೋಗ ಪಡೆದು ಉದ್ಯೋಗಾವಕಾಶ ಸೃಷ್ಟಿಸಬಹುದು. ಸರ್ಕಾರದಿಂದ ದೊರೆಯುವ ಶೇಕಡಾ 50ರಷ್ಟು ಸಬ್ಸಿಡಿಯು ನಿಮ್ಮ ಹೂಡಿಕೆಗೆ ಪೂರಕವಾಗಲಿದೆ.