Navodaya ನವೋದಯ ಶಾಲಾ ಪ್ರವೇಶಾತಿ 2026–27 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಹತೆ ಮತ್ತು ಅರ್ಜಿ ವಿಧಾನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಶೈಕ್ಷಣಿಕ ಉಜ್ವಲ ಭವಿಷ್ಯಕ್ಕೆ ನವೋದಯ ವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ಮಹತ್ವದ ಅವಕಾಶ ಸಿಕ್ಕಿದೆ.! 2026-27 ನೇ ಸಾಲಿನ 6ನೇ ತರಗತಿಯ ನವೋದಯ(Navodaya) ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಲ್ಲಾ ಸೌಲಭ್ಯಗಳೊಂದಿಗೆ ಉಚಿತ ಶಿಕ್ಷಣ ನೀಡುವ ಈ ಸಂಸ್ಥೆಯಲ್ಲಿ ಕಲಿಯುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಿಕ್ಕು ನೀಡಬಲ್ಲದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಜುಲೈ 2025
- ಪ್ರವೇಶ ಪರೀಕ್ಷೆ ದಿನಾಂಕ: 13 ಡಿಸೆಂಬರ್ 2025
Navodaya ನವೋದಯ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳು:
- ಪೂರ್ತಿ ಉಚಿತ ಶಿಕ್ಷಣ, ವಸತಿ, ಆಹಾರ ಮತ್ತು ಪಠ್ಯಪುಸ್ತಕಗಳು
- ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ತರಬೇತಿಯಂತಹ ಸಮಗ್ರ ಬೆಳೆವಣಿಗೆ ಸೌಲಭ್ಯಗಳು
- ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ
- ದಾರಿದ್ರ್ಯ ರೇಖೆಗಿಂತ ಕೆಳಗಿನ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ
- ಪಠ್ಯದ ಜೊತೆಗೆ ಕಲಾ, ಕ್ರೀಡೆ, ತಾಂತ್ರಿಕ ಹಾಗೂ ಜ್ಞಾನದ ಬೆಳವಣಿಗೆ
Navodaya ಪರೀಕ್ಷೆಯ ಮಾಹಿತಿಗಳು:
- ಪರೀಕ್ಷೆ ಬರೆಯಬಹುದಾದ ಭಾಷೆಗಳು: ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಮರಾಠಿ
- ಪರೀಕ್ಷೆ ಆಧಾರಿತ ಮೌಲ್ಯಮಾಪನದ ಮೂಲಕ ಆಯ್ಕೆ ಪ್ರಕ್ರಿಯೆ
Navodaya ಅರ್ಹತಾ ಮಾನದಂಡ:
- 2024-25ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಹರು
- ಜನನ ದಿನಾಂಕ 01 ಮೇ 2014 ರಿಂದ 30 ಏಪ್ರಿಲ್ 2016 ರ ನಡುವೆ ಇರಬೇಕು
- ವಿದ್ಯಾರ್ಥಿ ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಹೆಚ್ಚಿನ ಅವಧಿಯವರೆಗೆ ಓದಿರಬೇಕು
- ಈ ಹಿಂದೆ ನವೋದಯ ಪರೀಕ್ಷೆಗೆ ಹಾಜರಾಗಿರದವನು/ವಳು ಮಾತ್ರ ಅರ್ಜಿ ಸಲ್ಲಿಸಬಹುದು
ಅಗತ್ಯ ದಾಖಲೆಗಳು:
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪೋಷಕರ ಸಹಿ ಮತ್ತು ವಿದ್ಯಾರ್ಥಿಯ ಸಹಿ
- ವಾಸಸ್ಥಳ ದೃಡೀಕರಣ ಪತ್ರ
- ಅಧ್ಯಯನ ಪ್ರಮಾಣ ಪತ್ರ
- ವಿದ್ಯಾರ್ಥಿಯ ಪಾಸ್ಪೋರ್ಟ್ ಗಾತ್ರದ ಫೋಟೋ
Navodaya ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: Apply Now
- ಅರ್ಜಿ ನಮೂನೆ ಭರ್ತಿ ಮಾಡಿ
- ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಸಲ್ಲಿಸಿ ಮತ್ತು ದೃಢೀಕರಣ ಸಂಕೇತವನ್ನು ಸೇವ್ ಮಾಡಿಕೊಂಡು ಇಡಿ
🔗 ಉಪಯುಕ್ತ ಲಿಂಕ್ಗಳು:
- ಅಧಿಕೃತ ವೆಬ್ಸೈಟ್ ವೀಕ್ಷಿಸಲು: Click Here
- ಅರ್ಜಿ ಸಲ್ಲಿಸಲು: Apply Now
ಕೊನೆ ಮಾತು:
ನವೋದಯ ವಿದ್ಯಾಲಯವು ಗ್ರಾಮೀಣ ಪ್ರತಿಭೆಗಳಿಗೆ ಉನ್ನತ ಶಿಕ್ಷಣದ ಹೆಜ್ಜೆಹಾಕುವ ಹಾದಿ. ಅರ್ಜಿ ಸಲ್ಲಿಸಲು ವಿಳಂಬವಿಲ್ಲದೆ ಈ ಅವಕಾಶವನ್ನು ಬಳಸಿಕೊಳ್ಳಿ.