Kotak Scholorship:
ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೋಟಕ್ Kotak Scholarship ಮಹೀಂದ್ರಾ ಗ್ರೂಪ್ ಉತ್ತಮ ಸಂಧಿಯೊಂದನ್ನು ನೀಡಿದೆ. ಈ ಕೋಟಕ್ ಕನ್ಯಾ ವಿದ್ಯಾರ್ಥಿವೇತನ ಯೋಜನೆ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ರೂಪಿಸಲಾಗಿದೆ.
ಯೋಜನೆಯ ಮುಖ್ಯ ಉದ್ದೇಶ
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾನ್ವಿತ ಹೆಣ್ಣುಮಕ್ಕಳಿಗೆ:
- ವೃತ್ತಿಪರ ಶಿಕ್ಷಣವನ್ನು ಮುಂದುವರಿಸಲು
- ಸಾಲವಿಲ್ಲದೆ ಶಿಕ್ಷಣ ಪಡೆಯಲು
- ಸ್ವಾವಲಂಬಿ ಬದುಕು ರೂಪಿಸಲು ಸಹಾಯ
ಅರ್ಹತೆ.!
ಈ ಕೆಳಗಿನ ಶ್ರೇಣಿಯ ವಿದ್ಯಾರ್ಥಿನಿಯರು ಅರ್ಜಿ ಹಾಕಬಹುದು:
- ಇಂಜಿನಿಯರಿಂಗ್
- ಮೆಡಿಕಲ್ (MBBS)
- ಕಾನೂನು (LLB)
- BS-MS / Research
- IISER / IISC ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆದವರು
ಗಮನಿಸಿ: ವಿದ್ಯಾರ್ಥಿನಿಯರು 12ನೇ ತರಗತಿ ಉತ್ತೀರ್ಣರಾಗಿರಬೇಕು.
ವಿದ್ಯಾರ್ಥಿವೇತನದ ಮೊತ್ತ
ಪ್ರತಿ ವಿದ್ಯಾರ್ಥಿನಿಗೆ:
- ವಾರ್ಷಿಕ ₹1.5 ಲಕ್ಷ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- 12ನೇ ತರಗತಿಯ ಅಂಕಪಟ್ಟಿ
- ಪೋಷಕರ ಆದಾಯ ಪ್ರಮಾಣಪತ್ರ
- ಕಾಲೇಜು ಪ್ರವೇಶ ಪತ್ರ
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಸೈಜ್ ಫೋಟೋ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
31 ಆಗಸ್ಟ್ 2025ರೊಳಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವೆಬ್ಸೈಟ್
ಮಹತ್ವದ ಟಿಪ್ಪಣಿಗಳು
- ವಿದ್ಯಾರ್ಥಿನಿಯರು ಈ ಯೋಜನೆ ಮೂಲಕ ಹೆಚ್ಚು ಬಡ್ಡಿದರದ ಸಾಲದಿಂದ ದೂರವಿದ್ದು, ವಿದ್ಯಾಭ್ಯಾಸದಲ್ಲಿ ಸಧೃಢತೆಗೆ ಹೆಜ್ಜೆ ಇಡಬಹುದು.
- ಇದು ಸಾಮಾಜಿಕ ಸಮಾನತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಹೆಚ್ಚಿನ ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿವೇತನ ಲಭಿಸುವಂತೆ ಈ ಮಾಹಿತಿಯನ್ನು ಹಂಚಿಕೊಳ್ಳಿ.
ಇನ್ನಷ್ಟು ಯೋಜನೆಗಳಿಗಾಗಿ ನಮ್ಮೊಂದಿಗೆ ಇರಿ!
ಹೆಣ್ಣುಮಕ್ಕಳ ಶಿಕ್ಷಣ ಬಲವರ್ಧನೆಗೆ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಕೈಗೊಂಡಿರುವ ಯೋಜನೆಗಳ ಕುರಿತು ನಿರಂತರವಾಗಿ ಮಾಹಿತಿ ನೀಡಲಾಗುವುದು.