PMAY ಸ್ವಂತ ಮನೆ ಕಟ್ಟುವವರಿಗೆ ₹2.50 ಲಕ್ಷ ಸಹಾಯಧನ
ಭಾರತ ಸರ್ಕಾರದಿಂದ ಮಧ್ಯಮ ಹಾಗೂ ಬಡವರ್ಗದವರಿಗೆ ಸಿಹಿ ಸುದ್ದಿ! ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY 2.0) ಅಡಿಯಲ್ಲಿ, ಸ್ವಂತ ಮನೆ ಕಟ್ಟುವ ಆಸೆ ಹೊಂದಿರುವವರಿಗೆ ₹2.50 ಲಕ್ಷದವರೆಗೆ ಸಹಾಯಧನ ಪಡೆಯಲು ಅವಕಾಶವಿದೆ. ಈ ಯೋಜನೆ 2024ರ ಸೆಪ್ಟೆಂಬರ್ 1ರಿಂದ ಆರಂಭವಾಗಿ 2029ರ ವರೆಗೆ ಜಾರಿಗೆ ಬರಲಿದ್ದು, ಅರ್ಹ ಫಲಾನುಭವಿಗಳಿಗೆ ನೇರವಾಗಿ ಮನೆ ನಿರ್ಮಾಣ ಅಥವಾ ಖರೀದಿಗೆ ಆರ್ಥಿಕ ನೆರವು ನೀಡುತ್ತದೆ.
PMAY 2.0 ಯೋಜನೆಯ ಮುಖ್ಯ ಉದ್ದೇಶ
- ನಗರ ಬಡವರ್ಗ ಹಾಗೂ ಮಧ್ಯಮ ವರ್ಗದವರಿಗೆ ಮನೆಕಟ್ಟಲು ಸಹಾಯಧನ
- ಮನೆ ಖರೀದಿ ಅಥವಾ ಬಾಡಿಗೆ ಮನೆಗೆ ಸಹಾಯ
- ವೃದ್ಧರು, ಮಹಿಳೆಯರು, ದಿವ್ಯಾಂಗರು, ಟ್ರಾನ್ಸ್‌ಜೆಂಡರ್‌ಗಳು ಮೊದಲ ಆದ್ಯತೆ
- 1 ಕೋಟಿ ಮನೆಗಳ ಗುರಿ
ಯಾರೆಲ್ಲ ಅರ್ಜಿ ಸಲ್ಲಿಸಬಹುದು.?
- ಭಾರತದ ನಾಗರಿಕರಾಗಿರಬೇಕು
- ಮನೆಯಿಲ್ಲದವರು ಮಾತ್ರ ಅರ್ಹರು
- ಯಾವುದೇ ಸರ್ಕಾರಿ ಮನೆ ಯೋಜನೆಯ ಪ್ರಯೋಜನ ಪಡೆಯಿರಬಾರದು
- ವಾರ್ಷಿಕ ಆದಾಯದ ಪ್ರಕಾರ ಈ ಕೆಳಗಿನ ಗುಂಪುಗಳಿಗೆ ಅರ್ಹತೆ:
ವರ್ಗ | ವಾರ್ಷಿಕ ಆದಾಯ ಮಿತಿ |
---|---|
EWS (ಆರ್ಥಿಕವಾಗಿ ದುರ್ಬಲ ವರ್ಗ) | ₹3 ಲಕ್ಷದವರೆಗೆ |
LIG (ಕಡಿಮೆ ಆದಾಯದ ವರ್ಗ) | ₹3 ಲಕ್ಷ – ₹6 ಲಕ್ಷ |
MIG (ಮಧ್ಯಮ ಆದಾಯದ ವರ್ಗ) | ₹6 ಲಕ್ಷ – ₹9 ಲಕ್ಷ |
ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್ (Aadhar Card)
- ಆದಾಯ ಪ್ರಮಾಣ ಪತ್ರ (Income Certificate)
- ಜಾತಿ ಪ್ರಮಾಣ ಪತ್ರ (Caste Certificate)
- ಬ್ಯಾಂಕ್ ಪಾಸ್‌ಬುಕ್ (Bank Passbook)
- ಪೋಟೋ ಮತ್ತು ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವ ವಿಧಾನ (Online / Offline):
ಒನ್ ಲೈನ್ (Online):
- ಅಧಿಕೃತ ವೆಬ್‌ಸೈಟ್: https://pmaymis.gov.in
- “Apply Online” ಮೇಲೆ ಕ್ಲಿಕ್ ಮಾಡಿ
- ನಿಮ್ಮ ರಾಜ್ಯ, ಆದಾಯ ವರ್ಗ ಹಾಗೂ ಯೋಜನೆ ಆಯ್ಕೆಮಾಡಿ
- ಆಧಾರ್ ಡಿಟೇಲ್ಸ್ ತುಂಬಿ OTP ಮೂಲಕ ದೃಢೀಕರಿಸಿ
- ಎಲ್ಲ ವಿವರಗಳನ್ನು ಪೂರೈಸಿ “Submit” ಕ್ಲಿಕ್ ಮಾಡಿ
ಆಫ್‌ಲೈನ್ (Offline):
- ಹತ್ತಿರದ ಗ್ರಾಮ ಒನ್ ಕೇಂದ್ರ (Grama One) ಅಥವಾ ಸಿಎಸ್‌ಸಿ ಸೆಂಟರ್ (CSC) ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ
ಯೋಜನೆಯ ಪ್ರಮುಖ ಲಾಭಗಳು:
- ₹2.50 ಲಕ್ಷವರೆಗೆ ನೇರ ಸಹಾಯಧನ
- ಮನೆ ಕಟ್ಟಲು/ಖರೀದಿಸಲು ಇಳುವರಿ ಬಡ್ಡಿದರದ ಸಾಲ
- ಮಹಿಳೆಯರಿಗೆ ಪ್ರಾಥಮಿಕ ಆದ್ಯತೆ
- ನಗರ ಪ್ರದೇಶದಲ್ಲಿ ಮನೆ ಸ್ವಪ್ನ ಸಾಕಾರ
ಅಧಿಕೃತ ವೆಬ್‌ಸೈಟ್ & ಇನ್ನಷ್ಟು ಮಾಹಿತಿಗೆ:
ಪ್ರಮುಖ ದಿನಾಂಕಗಳು:
- ಯೋಜನೆ ಜಾರಿಮಾಡಲಿರುವ ಅವಧಿ: ಸೆಪ್ಟೆಂಬರ್ 1, 2024 – ಆಗಸ್ಟ್ 31, 2029
- ಅರ್ಜಿಯ ಕೊನೆಯ ದಿನಾಂಕ: ಶೀಘ್ರವೇ ಅಧಿಕೃತ ಪ್ರಕಟಣೆ ನಿರೀಕ್ಷಿಸಿ
📲 ಸಹಾಯವಾಣಿ ಸಂಖ್ಯೆ:
ಹೆಚ್ಚಿನ ಮಾಹಿತಿ ಅಥವಾ ಸಹಾಯಕ್ಕಾಗಿ ಸ್ಥಳೀಯ ನಗರಾಭಿವೃದ್ಧಿ ಅಧಿಕಾರಿಗಳನ್ನು ಅಥವಾ ಸರ್ಕಾರಿ ತಂತ್ರಜ್ಞಾನ ಕೇಂದ್ರಗಳನ್ನು ಸಂಪರ್ಕಿಸಿ.