Computer Training: 3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿ

 

Computer Training Course: 3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿ – ಈಗಲೇ ಅರ್ಜಿ ಹಾಕಿ.!

ನಿಮ್ಮ ಭವಿಷ್ಯ ರೂಪಿಸೋ ಅವಕಾಶ ಇಲ್ಲಿ ಇದೆ! ಬೆಂಗಳೂರು ಮಲ್ಲೇಶ್ವರಂನಲ್ಲಿ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯು, ಯುವ ನಿರುದ್ಯೋಗಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ(Computer Training) ನೀಡಲು ಅರ್ಜಿ ಆಹ್ವಾನಿಸಿದೆ. ಯಾವುದೇ ಶುಲ್ಕವಿಲ್ಲದೆ, ಸಂಪೂರ್ಣವಾಗಿ 3 ತಿಂಗಳ ಕಾಲ ಪ್ರಸಕ್ತ ತಂತ್ರಜ್ಞಾನ ತರಬೇತಿ ಪಡೆಯುವ ಅಪರೂಪದ ಅವಕಾಶ ಇದಾಗಿದೆ.

ಈ ತರಬೇತಿಯ ಉದ್ದೇಶವೇನು.?

ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಜ್ಞಾನವಿಲ್ಲದೆ ಉದ್ಯೋಗ ಪಡೆದಂತೆ ಅಷ್ಟೇ ದುಷ್ಕರ. ಇತ್ತ ಯುವಕರು ಉದ್ಯೋಗವಿಲ್ಲದೆ ಕಂಗಾಲಾಗಿರುವಾಗ, ಇತ್ತ ಕಂಪನಿಗಳಿಗೆ ತಂತ್ರಜ್ಞಾನ ಪರಿಣಿತರು ಬೇಕಾಗಿದ್ದಾರೆ. ಈ ಗ್ಯಾಪ್ ನ ಭರ್ತಿಗೆ ಕೆನರಾ ಬ್ಯಾಂಕ್ ಕೈಜೋಡಿಸಿದೆ – ಉಚಿತವಾಗಿ ತರಬೇತಿ ನೀಡಿ, ಯುವಕರಿಗೆ ಹೊಸ ದಾರಿ ತೆರೆದು ಕೊಡಲು!

ತರಬೇತಿ ಒಳಗೊಂಡಿರುವ ಕೋರ್ಸ್‌ಗಳು:

  • ಮೈಕ್ರೋಸಾಫ್ಟ್ ಆಫೀಸ್ (Word, Excel, PowerPoint)
  • ಟ್ಯಾಲಿ ಮತ್ತು ಅಕೌಂಟಿಂಗ್ ತಂತ್ರಾಂಶ
  • ಡಿಟಿಪಿ (Coral Draw, Photoshop)
  • ಹಾರ್ಡ್‌ವೇರ್ ಮತ್ತು ನೆಟ್ವರ್ಕಿಂಗ್ ಜ್ಞಾನ
  • ಸ್ಪೋಕನ್ ಇಂಗ್ಲಿಷ್
  • ವ್ಯಕ್ತಿತ್ವ ವಿಕಸನ ಮತ್ತು Soft Skills
  • ಬ್ಯಾಂಕಿಂಗ್ ಪರಿಚಯ

ತರಬೇತಿ ಆರಂಭದ ದಿನಾಂಕ:

ಜುಲೈ 1, 2025 ರಂದು ತರಬೇತಿ ಆರಂಭವಾಗಲಿದ್ದು, 3 ತಿಂಗಳ ಕಾಲ ಬೆಳಿಗ್ಗೆ 9:30 ರಿಂದ ಸಂಜೆ 5:30ರವರೆಗೆ ತರಗತಿಗಳು ನಡೆಯಲಿವೆ. ಮಧ್ಯಾಹ್ನ ಉಪಹಾರವನ್ನು ಸಂಸ್ಥೆ ಒದಗಿಸುತ್ತದೆ.

ಯಾರು ಅರ್ಜಿ ಹಾಕಬಹುದು.?

  • ಕನಿಷ್ಠ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು
  • ಪಿಯುಸಿ / ಡಿಪ್ಲೋಮಾ / ಡಿಗ್ರಿ ಹೊಂದಿದವರಿಗೆ ಹೆಚ್ಚಿನ ಆದ್ಯತೆ
  • 18 ರಿಂದ 30 ವರ್ಷಗಳೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು
  • ಪರಿಶಿಷ್ಟ ಜಾತಿ / ಪಂಗಡದ ಅಭ್ಯರ್ಥಿಗಳಿಗೆ ವಯೋಮಿತಿ: 35 ವರ್ಷ
  • ಅರ್ಜಿ ಸಲ್ಲಿಸಲು ಅಭ್ಯರ್ಥಿ ಕರ್ನಾಟಕದ ನಿವಾಸಿ ಆಗಿರಬೇಕು

ತರಬೇತಿ ನಡೆಯುವ ಸ್ಥಳ:

ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ
ಚಿತ್ರಾಪುರ ಭವನ, 3ನೇ ಮಹಡಿ,
15ನೇ ಕ್ರಾಸ್, ಮಲ್ಲೇಶ್ವರಂ,
ಬೆಂಗಳೂರು – 560055

ಅರ್ಜಿಯ ವಿಧಾನ:

ಈ ತರಬೇತಿಗೆ ಆನ್ಲೈನ್ ಅರ್ಜಿ ಇಲ್ಲ. ಆಸಕ್ತರು ನೇರವಾಗಿ ಸಂಸ್ಥೆಗೆ ಬಂದು ಸುದ್ದಿ ದಿನಗಳಲ್ಲಿ ಬೆಳಿಗ್ಗೆ 11 ಗಂಟೆಗೆ ಹಾಜರಾಗಿ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಭಾಗವಹಿಸಬೇಕು. ಅರ್ಜಿ ಫಾರಂ ಅನ್ನು ಅಲ್ಲಿಯಲ್ಲೇ ಪಡೆದು ಭರ್ತಿ ಮಾಡಬಹುದಾಗಿದೆ.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್ (ನಕಲು)
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ವಿದ್ಯಾರ್ಹತೆಯ ಅಂಕಪಟ್ಟಿಗಳು
  • ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು
  • ಆಧುನಿಕ ಮೊಬೈಲ್ ನಂಬರ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ದೂರವಾಣಿ:
📞 080-23440036
📞 080-23463580
📱 94485 38107

ಇಮೇಲ್:
📧 blorecbiit@gmail.com
📧 cbiitblr@canarabank.com

ಡಿಜಿಟಲ್ ಜ್ಞಾನವಿಲ್ಲದೆ ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಬಲವಾಗಿ ಉಳಿಯಲು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರಿಗೂ ಖಾಸಗಿ ತರಬೇತಿ ಸಂಸ್ಥೆಗಳ ಶುಲ್ಕವನ್ನು ಹೊರುವ ಸಾಮರ್ಥ್ಯವಿಲ್ಲ. ಅಂತಹವರಿಗಾಗಿ ಕೆನರಾ ಬ್ಯಾಂಕ್ ನೀಡುತ್ತಿರುವ ಈ ಉಚಿತ ತರಬೇತಿ ಉತ್ತಮ ಅವಕಾಶವಾಗಿದೆ. ನೀವು ಅಥವಾ ನಿಮ್ಮ ಬಂಧು-ಮಿತ್ರರು ಈ ತರಬೇತಿಯ ಲಾಭ ಪಡೆಯಲು ಅರ್ಹರಾಗಿದ್ದರೆ, ತಪ್ಪದೇ ಈ ಮಾಹಿತಿ ಹಂಚಿಕೊಳ್ಳಿ.!

 

 

WhatsApp Group Join Now
Telegram Group Join Now

Leave a Comment